ಸೀಸಿಯಮ್ 

	ಆವರ್ತಕೋಷ್ಟಕದ 1ಎ ಗುಂಪಿನ 6ನೆಯ ಆವರ್ತದ  ಮೊದಲನೆಯ ಧಾತು. ಪ್ರತೀಕ Cs. ಪರಮಾಣು ಸಂಖ್ಯೆ 55. ಪರಮಾಣು ತೂಕ 132.9. ದ್ರವನಬಿಂದು 28.60 ಸೆ. ಕುದಿಬಿಂದು 6870 ಸೆ. ಸಾಂದ್ರತೆ 1.870. ಎಲೆಕ್ಟ್ರಾನ್ ವಿನ್ಯಾಸ 1s2 2s2 2ಠಿ6 3s2 3ಠಿ6 3ಜ10 4s2 4ಠಿ6 5s2 5ಠಿ6 6ಜ1. ಸೀಸಿಯಮ್-131, 135, 133, 134 ಮತ್ತು 137 ಸಮಸ್ಥಾನಿಗಳು. ಈ ಪೈಕಿ ಕೊನೆಯ ಮೂರು ಸ್ಥಿರವಾದವು.  

	ಮೃದು, ಸ್ವಜ್ವಲನಶೀಲ, ಕ್ಷಾರಲೋಹೀಯ ಧಾತು. ಇದು ಎಲ್ಲ ಧಾತುಗಳ ಪೈಕಿ ಅತ್ಯಂತ ಕ್ರಿಯಾಶೀಲ ಹಾಗೂ ವಿದ್ಯುದ್ಧನ. ಸಂಯುಕ್ತಗಳಲ್ಲಿ ಇದರ ಉತ್ಕರ್ಷಣ ಸ್ಥಿತಿ +1. ಧಾತುಲಭ್ಯತೆಯ ಸಮೃದ್ಧಿಆಧಾರಿತ ಸರಣಿಯಲ್ಲಿ ಸೀಸಿಯಮಿನ ಕ್ರಮಾಂಕ 46. ಪಲ್ಯುಸೈಟ್, ಲೆಪಿಡೊಲೈಟ್, ಕಾರ್ನಲೈಟ್ ಅದುರುಗಳಲ್ಲಿ ಲಭ್ಯ. 1956ರ ತರುವಾಯ ಲೀತಿಯಮ್ ಉತ್ಪಾದನೆಯ ಉಪೋತ್ಪನ್ನವಾಗಿಯೂ ಲಭ್ಯ. ಇದನ್ನು ರೋಹಿತವಿಶ್ಲೇಷಣೆ ಮುಖೇನ ಜರ್ಮನ್ ರಸಾಯನವಿಜ್ಞಾನಿ ರಾಬರ್ಟ್ ವಿಲ್‍ಹೆಲ್ಮ್ ಬುನ್ಸೆನ್ (1811-90) ಮತ್ತು ಭೌತವಿಜ್ಞಾನಿ ಗಸ್ಟಾವ್ ರಾಬರ್ಟ್ ಕಿರ್ಚಾಫ್ (1824-87) ಆವಿಷ್ಕರಿಸಿದರು (1860). 

	ದ್ಯುತಿವಿದ್ಯುತ್ಕೋಶ, ರೋಹಿತಲೇಖನ (ಸ್ಪೆಕ್ಟ್ರೊಗ್ರ್ಯಾಫಿಕ್) ಉಪಕರಣ, ಸ್ಫುರಣಗುಣಕ (ಸಿಂಟಿಲೇಶನ್ ಕೌಂಟರ್), ಅವಕೆಂಪು ಸಂಜ್ಞೆದೀಪ, ವಿವಿಧ ದ್ಯುತಿ (ಆಪ್ಟಿಕಲ್) ಮತ್ತು ಸಂಸೂಚನ (ಡಿಟೆಕ್ಟಿಂಗ್) ಸಾಧನ ಮುಂತಾದವುಗಳಲ್ಲಿ ಬಳಕೆ ಇದೆ. ಗಾಜು, ಸಿರ್ಯಾಮಿಕ್ ಉದ್ಯಮಗಳಲ್ಲಿ, ಕೆಲವು ಸನ್ನಿವೇಶಗಳಲ್ಲಿ ಪ್ರತ್ಯಾಘಾತಕಾರಕಗಳಾಗಿ (ಆ್ಯಂಟಿಶಾಕ್ ಏಜೆಂಟ್) ವೈದ್ಯಕೀಯ ಕ್ಷೇತ್ರದಲ್ಲಿ ಸೀಸಿಯಮ್ ಸಂಯುಕ್ತಗಳ ಬಳಕೆ ಇದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅs-137ನ್ನು ಬಳಸುವುದುಂಟು.	
	(ಎಸ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ